Friday, September 21, 2012

My Amatuer literature

I am no poet but that shouldnt stop me from writing what in my mind in my familiar language in my personal blog. So here i go with the short poems i come up with. the first ones here below.


ಈ ಜೀವವೆಂಬ ದೋಣಿ ಸಾಗುತಿದೆ
ಜೀವನ ಒಂದು ಸಾಗರದಂತೆ ಕಾಣುತಿದೆ
ಅಲೆಗಳ ಅಬ್ಬರಕೆ ನಾ ಹೆದರಲಾರೆ
ಹೆದರಿ ಮುಳುಗಲು ನಾ ಒಪ್ಪಲಾರೆ
ಹೆದರಿದರೆ ಓಡಿ ಹೋಗಲು ಕಾಣುತ್ತಿಲ್ಲ ಸಾಗರದ ತೀರ
ಹೆದರದಿರಲು ನಾನಾಗಬೇಕು ಧೀರ .
ಒಂಟಿಯಾಗಿರುವೆ ಈ ಜೀವನದ ಪಯಣದಲಿ
ಜೊತೆಗಾರರ ಕೊರತೆ ಕಾಣುವುದು ದಾರಿಯಲಿ
ನೀ ಹೋಗುವ ಪಥದಲಿ ಸಿಗುವರು ಸಹ ಪ್ರಯಾಣಿಕರು ಇಂದು
ದಡಮುಟ್ಟುವವರೆಗೂ ನಿನ್ನ ಸಂಗಡ ಇರಲು ಭರವಸೆ ನೀಡರು ಎಂದು
ಜೊತೆಗಾರರ ಕೊರತೆ ನಿಲ್ಲಿಸದು ದಡದೆಡೆಗೆ ನಿನ್ನ ಪಯಣ ಎಂದೆಂದಿಗೂ.
 
                                                               - ಒಂಟಿ ನಾವಿಕ (ನವೀನ)
 

No comments:

Post a Comment